ಹಾರ್ದಿಕ್ ಪಾಂಡ್ಯ vs ಮುರಳಿ ಕಾರ್ತಿಕ್: ರಾಯಪುರದಲ್ಲಿ ಪಂದ್ಯಕ್ಕೂ ಮುನ್ನ ನಡೆದ ಬಿಸಿ ಬಿಸಿ ವಾಗ್ವಾದದ ವಿಡಿಯೋ ವೈರಲ್!
ರಾಯಪುರದಲ್ಲಿ ನಡೆದ ಭಾರತ vs ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಒಂದು ಅಚ್ಚರಿಯ ಘಟನೆ ನಡೆದಿದೆ. ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಮಾಜಿ ಕ್ರಿಕೆಟಿಗ, ಸದ್ಯ ಕ್ರಿಕೆಟ್ ವಿಶ್ಲೇಷಕರಾಗಿರುವ ಮುರಳಿ ಕಾರ್ತಿಕ್ ನಡುವೆ ನಡೆದ ಮಾತಿನ ಚಕಮಕಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮುರಳಿ ಕಾರ್ತಿಕ್ ಯಾವುದೋ ಒಂದು ವಿಚಾರದ ಬಗ್ಗೆ ಹಾರ್ದಿಕ್ ಪಾಂಡ್ಯ ಅವರಿಗೆ ವಿವರಿಸುತ್ತಾ ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಿರುವುದು ಕಾಣುತ್ತದೆ. … Read more