Super Six: ಕ್ರಿಕೆಟ್ ಲೋಕದ 6 ದೊಡ್ಡ ಸುದ್ದಿಗಳು
🔴 ಬೆದರಿದ ಪಾಕ್, ಕೊನೆಗೂ T20 ವಿಶ್ವಕಪ್ ತಂಡ ಪ್ರಕಟ
ಫೆಬ್ರವರಿ 7ರಂದು ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಕೊನೆಗೂ ಪಾಕಿಸ್ತಾನ ತಂಡವನ್ನು ಘೋಷಿಸಿದೆ. ಭದ್ರತಾ ಕಾರಣ ನೀಡಿ ಬಾಂಗ್ಲಾದೇಶ ಟಿ20 ಟೂರ್ನಿಯಿಂದ ಹಿಂದೆ ಸರಿದ ಬಳಿಕ, ಪಾಕ್ ಕೂಡ ವಿಶ್ವಕಪ್ ಬಹಿಷ್ಕಾರದ ಎಚ್ಚರಿಕೆ ನೀಡಿತ್ತು.
ಆದರೆ ಐಸಿಸಿ ನೀಡಿದ ಖಡಕ್ ಎಚ್ಚರಿಕೆಯಿಂದ ಬೆದರಿದ ಪಿಸಿಬಿ, ಕೊನೆಗೂ ತಂಡ ಘೋಷಿಸಿದೆ. ಪಾಕಿಸ್ತಾನ ತನ್ನ ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
💔 ಚಹಾಲ್ಗೆ ಹೊಸ ಲವ್..? ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ
ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಧನಶ್ರೀ ವರ್ಮಾ ಜೊತೆ ವಿಚ್ಛೇದನದ ನಂತರ, ಆರ್.ಜೆ ಮಹ್ವಾಶ್ ಜೊತೆ ಕಾಣಿಸಿಕೊಂಡಿದ್ದ ಚಹಾಲ್, ಈಗ ಮಹ್ವಾಶ್ರನ್ನು ಸೋಶಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡಿದ್ದಾರೆ.
ಇದರ ನಡುವೆಯೇ ಟಿವಿ ನಿರೂಪಕಿ ಶೆಫಾಲಿ ಬಗ್ಗಾ ಜೊತೆ ಒಟ್ಟಾಗಿ ಕಾಣಿಸಿಕೊಂಡಿರುವುದು ಫ್ಯಾನ್ಸ್ ನಡುವೆ ಹೊಸ ಕುತೂಹಲಕ್ಕೆ ಕಾರಣವಾಗಿದೆ. “ಚಹಾಲ್ ಜೀವನದಲ್ಲಿ ಮತ್ತೊಬ್ಬರ ಎಂಟ್ರಿಯೇ?” ಎಂಬ ಪ್ರಶ್ನೆ ಟ್ರೆಂಡ್ ಆಗುತ್ತಿದೆ.
🏆 ಪರ್ತ್ ಸ್ಕಾರ್ಚರ್ಸ್ ಬಿಗ್ ಬ್ಯಾಷ್ ಚಾಂಪಿಯನ್ಸ್
ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿಯ ಚಾಂಪಿಯನ್ ಆಗಿ ಪರ್ತ್ ಸ್ಕಾರ್ಚರ್ಸ್ ಹೊರಹೊಮ್ಮಿದೆ. ಫೈನಲ್ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ, 6ನೇ ಬಾರಿ ಬಿಬಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತು.
ಈ ಗೆಲುವಿನ ಮೂಲಕ 3 ಕೋಟಿ ರೂ. ಬಹುಮಾನ ಪಡೆದುಕೊಂಡ ಸ್ಕಾರ್ಚರ್ಸ್, ಬಿಬಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಟೈಟಲ್ ಗೆದ್ದ ತಂಡ ಎಂಬ ದಾಖಲೆ ಬರೆದಿದೆ.
📊 ಜೋ ರೂಟ್ – ಇಂಗ್ಲೆಂಡಿನ ದಾಖಲೆಯ ಸರದಾರ
ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಜೋ ರೂಟ್ ಆಲ್ರೌಂಡ್ ಪ್ರದರ್ಶನ ನೀಡಿ ಮಿಂಚಿದರು. ಅರ್ಧಶತಕ ಜೊತೆಗೆ 2 ವಿಕೆಟ್ ಪಡೆದು ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದ ರೂಟ್, ಕೆವಿನ್ ಪೀಟರ್ಸನ್ ದಾಖಲೆ ಮುರಿದರು.
277 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 26 ಬಾರಿ ಮ್ಯಾನ್ ಆಫ್ ದ ಮ್ಯಾಚ್ ಪಡೆದಿದ್ದ ಪೀಟರ್ಸನ್ ದಾಖಲೆಯನ್ನು ಮೀರಿಸಿ, ರೂಟ್ 27ನೇ ಬಾರಿ ಈ ಗೌರವ ಪಡೆದುಕೊಂಡಿದ್ದಾರೆ.
👑 ಕ್ರಿಕೆಟ್ಗೆ ವಿರಾಟ್ ಕೊಹ್ಲಿಯೇ ಕಿಂಗ್ – ಝ್ಯಾಂಪ್
ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಌಡಂ ಝ್ಯಾಂಪ್, ವಿರಾಟ್ ಕೊಹ್ಲಿಯನ್ನು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ವಿರಾಟ್ ಕೊಹ್ಲಿ ಕೇವಲ ವೈಟ್ಬಾಲ್ ಕ್ರಿಕೆಟ್ನಲ್ಲಷ್ಟೇ ಅಲ್ಲ, ಸಂಪೂರ್ಣ ಕ್ರಿಕೆಟ್ಗೆ ಕಿಂಗ್. ಅವರ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ” ಎಂದು ಝ್ಯಾಂಪ್ ಹೇಳಿದ್ದಾರೆ. ಕೊಹ್ಲಿ ಇದೇ ಫಾರ್ಮ್ ಮುಂದುವರೆಸಿದರೆ, 100 ಅಂತರಾಷ್ಟ್ರೀಯ ಶತಕಗಳ ಮೈಲುಗಲ್ಲು ತಲುಪುವುದು ಖಚಿತ ಎಂದಿದ್ದಾರೆ.
🔥 RCB Women vs MI Women – ಇಂದು ಸೂಪರ್ ಫೈಟ್
ಬರೋಡಾದಲ್ಲಿ ನಡೆಯಲಿರುವ RCB ವುಮೆನ್ಸ್ vs MI ವುಮೆನ್ಸ್ ಪಂದ್ಯದಲ್ಲಿ ಗೆಲುವಿಗಾಗಿ ಎರಡೂ ತಂಡಗಳು ಜಿದ್ದಾಜಿದ್ದಿ ಹೋರಾಟ ನಡೆಸಲಿವೆ. RCBಗೆ ಇದು ಪ್ಲೇಆಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳುವ ಮಹತ್ವದ ಅವಕಾಶ.