ರಿಯಾಲಿಟಿ ಶೋಗಳಲ್ಲಿ ಗೆದ್ದ ಹಣವನ್ನು ಸರ್ಕಾರ Windfall Gain ಅಂತ ಪರಿಗಣಿಸುತ್ತದೆ. ಅಂದರೆ ಇದು ಸಾಮಾನ್ಯ ಆದಾಯ ಅಲ್ಲ. ಹೀಗಾಗಿ ಇದಕ್ಕೆ ಭಾರಿ ಪ್ರಮಾಣದ Income Tax ಕಟ್ ಆಗುತ್ತೆ. ಬಿಗ್ಬಾಸ್ನಂತಹ ಟೆಲಿವಿಷನ್ ಶೋಗಳಲ್ಲಿ ಗೆದ್ದ ಮೊತ್ತಕ್ಕೆ ನೇರವಾಗಿ 30% TDS ಕಟ್ ಮಾಡಲಾಗುತ್ತದೆ.
ಅಂದ್ರೆ, ಗಿಲ್ಲಿ ಗೆದ್ದ 50 ಲಕ್ಷ ರೂಪಾಯಿಯಲ್ಲಿ ನೇರವಾಗಿ 15 ಲಕ್ಷ ರೂಪಾಯಿ ಸರ್ಕಾರಕ್ಕೆ ಹೋಗುತ್ತೆ. ಇದ್ರಲ್ಲೇ ಕಥೆ ಮುಗಿದ್ರೆ ಸರಿ. ಆದರೆ ಇನ್ನೊಂದು ಕಟ್ ಕೂಡ ಇದೆ.
1961ರ ಇನ್ಕಮ್ ಟ್ಯಾಕ್ಸ್ ಕಾಯ್ದೆಯ Section 115BB ಪ್ರಕಾರ, ಈ 15 ಲಕ್ಷ ಟ್ಯಾಕ್ಸ್ ಮೇಲೆಯೇ ಮತ್ತೆ 4% Health and Education Cess ಕಟ್ಟಲೇಬೇಕು. ಇದರ ಲೆಕ್ಕಾಚಾರ ಮಾಡಿದ್ರೆ, 60 ಸಾವಿರ ರೂಪಾಯಿ ಸೆಸ್ ಆಗುತ್ತೆ.
ಹೀಗಾಗಿ ಒಟ್ಟು ಕಟ್ ಆಗೋದು:
ಅಂತಿಮವಾಗಿ 50 ಲಕ್ಷ ರೂಪಾಯಿಯಲ್ಲಿ ಗಿಲ್ಲಿ ಕೈಗೆ ಸಿಗೋದು ₹34,40,000 ಮಾತ್ರ. ಅಂದರೆ ಸುಮಾರು 16 ಲಕ್ಷ ರೂಪಾಯಿ ಕೈಗೆ ಬರೋದಕ್ಕೂ ಮುಂಚೆ ತೆರಿಗೆಯಲ್ಲೇ ಕರಗಿಹೋಗುತ್ತೆ.
ಇಷ್ಟು ಕಟ್ ಆಗೋದನ್ನ ನೋಡಿ ಜನಸಾಮಾನ್ಯರಿಗೆ “ಇದು ಅನ್ಯಾಯ” ಅನ್ನಿಸಬಹುದು. 100 ದಿನಗಳ ಕಾಲ ಕಷ್ಟಪಟ್ಟು, ಮಾನಸಿಕ ಒತ್ತಡ ಸಹಿಸಿ ಗೆದ್ದ ಹಣಕ್ಕೆ ಇಷ್ಟು ಟ್ಯಾಕ್ಸ್ ಯಾಕೆ ಅನ್ನೋ ಪ್ರಶ್ನೆ ಸಹಜ. ಆದರೆ ಕಾನೂನು ಪ್ರಕಾರ ಲಾಟರಿ, ಗೇಮ್ ಶೋ, ರೇಸ್ಗಳಿಂದ ಬಂದ ಹಣಕ್ಕೆ ಯಾವುದೇ ವಿನಾಯಿತಿ ಇಲ್ಲ.
ಟ್ಯಾಕ್ಸ್ ಎಷ್ಟೇ ಕಟ್ ಆಗಲಿ, ಗಿಲ್ಲಿ ಗೆದ್ದಿರೋದು ಬರೀ ಹಣ ಅಲ್ಲ – ಜನರ ಮನಸ್ಸು. ದುಡ್ಡು ಖರ್ಚಾಗಬಹುದು, ಆದ್ರೆ ವಿನ್ನರ್ ಪಟ್ಟ ಮತ್ತು ಜನ ಕೊಟ್ಟ ಪ್ರೀತಿ ಶಾಶ್ವತ. 34 ಲಕ್ಷದಲ್ಲೇ ಗಿಲ್ಲಿ ತಮ್ಮ ಕನಸುಗಳನ್ನು ನನಸು ಮಾಡಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.
1 thought on “Nata Gilli Winning Amount: 50 ಲಕ್ಷದಲ್ಲಿ ಗಿಲ್ಲಿ ಕೈಗೆ ಬಂದಿಲ್ಲ”