ಸ್ನೇಹಿತರೆ,
ನಮಗೆಲ್ಲಾ ಶಾಲೆಯ ದಿನಗಳಲ್ಲಿ ಗುರುಗಳು ಹೇಳಿಕೊಟ್ಟ ಪದ್ಯ ಇನ್ನೂ ನೆನಪಿದೆಯೇ?
“ಹಾಡಿ ಬಾ ಎನ ಕಂದ, ಅಂಗಾಲ ತೊಳೆದೆನು…”
ಆ ಪದ್ಯ ಕೇಳಿದಾಗಲೇ ಮನಸ್ಸು ಹಗುರವಾಗುತ್ತಿತ್ತು. ಆಟ, ನಗು, ಓಟ—all-in-one childhood ❤️
ಆದ್ರೆ ಇಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿದೆ?
ಮಕ್ಕಳು ಹೊರಗಡೆ ಆಟ ಆಡ್ತಾರೆ ಅಂದ್ರೆ,
👉 “ಕಾಲು ಮುರಿದುಕೊಳ್ಳುತ್ತಾನೆ”
👉 “ಹೊರಗೆ ಹೋಗಬೇಡ”
ಅನ್ನೋ ಮಾತುಗಳೇ ಪೋಷಕರಿಂದ ಬರುತ್ತಿವೆ.
ಇನ್ನೂ ದುಃಖದ ಸಂಗತಿ ಏನಪ್ಪಾ ಅಂದ್ರೆ,
ಅಪಾರ್ಟ್‌ಮೆಂಟ್, ಲೇಔಟ್, ಬಡಾವಣೆಗಳನ್ನು ನಿರ್ಮಿಸುವಾಗ ಮಕ್ಕಳಿಗೆ ಆಟದ ಮೈದಾನವೇ ಇಲ್ಲ!
ಪಾರ್ಕ್ ಅಂತ ಹೇಳಿ ಸ್ವಲ್ಪ ಹಸಿರು ಹುಲ್ಲು, ವಾಕಿಂಗ್ ಟ್ರ್ಯಾಕ್ ಮಾಡಿ ಕೈ ತೊಳೆಯುತ್ತಾರೆ.
ಕೆಲವು ಮಕ್ಕಳು ಬಸ್ ನಿಲ್ದಾಣವನ್ನೇ ಆಟದ ಮೈದಾನ ಮಾಡಿಕೊಂಡು ಆಟ ಆಡ್ತಾ ಹಾಡ್ತಾ ಇದ್ದರು.
ಒಮ್ಮೆ ಅವರಿಗೆ ಕೇಳಿದೆ —
“ಇನ್ನೂ ಸ್ವಲ್ಪ ದಿನದಲ್ಲಿ ಈ ಬಸ್ ಸ್ಟ್ಯಾಂಡ್ ಓಪನ್ ಆದ್ರೆ, ನೀವು ಎಲ್ಲಿಗೆ ಆಟ ಆಡ್ತೀರಾ?”
ಅವರ ಮುಖದಲ್ಲಿ ಬಂದ ಬೇಸರದ ಭಾವನೆ ಇಂದಿಗೂ ಮರೆಯಲು ಸಾಧ್ಯವಾಗಿಲ್ಲ 😔
ವಿಷಯ ಸರಳವಾಗಿದೆ.
ಹೊಸ ಬಡಾವಣೆಗಳು, ಲೇಔಟ್‌ಗಳು ನಿರ್ಮಾಣವಾಗುವಾಗ ಮಕ್ಕಳಿಗೆ ಕಡ್ಡಾಯವಾಗಿ ಆಟದ ಮೈದಾನ ಇರಲೇಬೇಕು.
ಆಟ ಕೇವಲ ಮನರಂಜನೆ ಅಲ್ಲ –
✔ ದೈಹಿಕ ಆರೋಗ್ಯ
✔ ಮಾನಸಿಕ ಉಲ್ಲಾಸ
✔ ಅಕ್ಕಪಕ್ಕದ ಮಕ್ಕಳ ಪರಿಚಯ
✔ ಉತ್ತಮ ಕಲಿಕೆ
ಇವೆಲ್ಲಕ್ಕೂ ಆಟ ಅತ್ಯಂತ ಅಗತ್ಯ.
ಆಟ ಇಲ್ಲದೆ ಬೆಳೆದ ಮಕ್ಕಳು ಮುಂದೆ
ಮೊಬೈಲ್, ಟಿವಿ, ರೂಮ್ ಒಳಗೆ ಸೀಮಿತವಾಗುವ ಅಪಾಯ ಹೆಚ್ಚಿದೆ.
ಅಭಿವೃದ್ಧಿಯ ಹೆಸರಿನಲ್ಲಿ,
ಮಕ್ಕಳ ಸುಂದರ ಬಾಲ್ಯವನ್ನು ಕಸಿದುಕೊಳ್ಳಬಾರದು.
ಆದ್ದರಿಂದ ಪೋಷಕರೇ, ಸಮಾಜವೇ, ಸರ್ಕಾರವೇ—
ಮಕ್ಕಳ ಆಟದ ಮೈದಾನ ಕಡ್ಡಾಯವಾಗುವಂತೆ ಕಾನೂನು ಜಾರಿಗೆ ತರಬೇಕು.
ಇಲ್ಲದಿದ್ದರೆ ಮಕ್ಕಳು ಕೇವಲ “ಗೊಂಬೆಗಳು” ಆಗಿ ಮಾರ್ಪಾಡಾಗುವ ದಿನ ದೂರವಿಲ್ಲ ⚠️
👉 ಇದು ನನ್ನ ಅನಿಸಿಕೆ.
👉 ನಿಮ್ಮ ಅನಿಸಿಕೆ ಏನು?
ಮಕ್ಕಳಿಗೆ ಇರಲಿ ಆಟದ ಮೈದಾನ, ಅಭಿವೃದ್ಧಿಯ ನೆಪದಲ್ಲಿ ಕಳೆದು ಹೋಗಬಾರದು
ಮಕ್ಕಳ ಸುಂದರ ದಿನಗಳು… 💔
ಇದರ ಬಗ್ಗೆ ಧ್ವನಿ ಎತ್ತಿ ವಿಡಿಯೋ ಮಾಡಿದ ಸ್ವಯಂ ಜಾಗೃತಿ ತಂಡಕ್ಕೆ ಧನ್ಯವಾದಗಳು.ಅವರು ಯಾವ ವಿಡಿಯೋ ಮಾಡಿದ್ದಾರೆ ಎಂದು ತಿಳಿಯಲು ಆಸಕ್ತಿ ಇದ್ದರೆ ಕೆಳಗಡೆ ಇರುವ ಲಿಂಕ್ ಮೂಲಕ ತಿಳಿಯಿರಿ.
https://www.facebook.com/reel/3858472437509030
ಮಕ್ಕಳ ಭವಿಷ್ಯವನ್ನು ನಾಶ ಮಾಡುತ್ತಿದ್ದೆಯಾ ಈ ಸರ್ಕಾರ ???…..
ಧ್ವನಿ ಎತ್ತಿದೆ ಸ್ವಯಂ ಜಾಗೃತಿ………