WhatsApp Join My WhatsApp

RCB ಕನಸೇ ಮುರಿದುಹೋಯಿತು… ಸಿವರ್-ಬ್ರಂಟ್ ಸ್ಫೋಟಕ ಶತಕ, ಮುಂಬೈ ವಿಜಯ

ವಡೋದರಾ: ಆಲ್‌ರೌಂಡರ್ ಸ್ಟಾರ್ ನಾಟ್ ಸಿವರ್-ಬ್ರಂಟ್ (Nat Sciver-Brunt) ಅವರ ಸ್ಫೋಟಕ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡ ಆರ್‌ಸಿಬಿ (RCB) ವಿರುದ್ಧ 15 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದು ಪ್ಲೇಆಫ್ ರೇಸ್‌ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿದೆ.

capture

ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಈ ಇನಿಂಗ್ಸ್‌ಗೆ ಸಿವರ್-ಬ್ರಂಟ್ ಅವರ ಅದ್ಭುತ ಶತಕವೇ ಪ್ರಮುಖ ಆಧಾರವಾಗಿತ್ತು.

ರಣರಂಗದಲ್ಲಿ ರೊಚ್ಚಿಗೆದ್ದ RICHA GOSH

capture

200 ರನ್‌ಗಳ ಗಟ್ಟಿದ ಸವಾಲನ್ನು ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಕುಸಿತಕ್ಕೆ ಒಳಗಾಯಿತು. ಕೇವಲ 35 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿಗೆ ಸೋಲು ಬಹುತೇಕ ಖಚಿತವಾಗಿತ್ತು. ಆದರೂ ಯುವ ಬ್ಯಾಟರ್ ರಿಚಾ ಘೋಷ್ (Richa Ghosh) ಅವರ ಸ್ಫೋಟಕ ಅರ್ಧಶತಕ ತಂಡಕ್ಕೆ ಸ್ವಲ್ಪ ಗೌರವ ತಂದುಕೊಟ್ಟಿತು.

ರಿಚಾ ಘೋಷ್ ಹಾಗೂ ನಾಡಿನ್ ಡಿ ಕ್ಲರ್ಕ್ ಜೋಡಿ 36 ಎಸೆತಗಳಲ್ಲಿ 42 ರನ್‌ಗಳ ಅಮೂಲ್ಯ ಜೊತೆಯಾಟ ನಡೆಸಿ ತಂಡವನ್ನು ಚೇತರಿಸಿತು. ನಾಡಿನ್ ಡಿ ಕ್ಲರ್ಕ್ 20 ಎಸೆತಗಳಲ್ಲಿ 28 ರನ್ (3 ಬೌಂಡರಿ, 1 ಸಿಕ್ಸರ್) ಬಾರಿಸಿದರೆ, ಅರುಂಧತಿ ರೆಡ್ಡಿ 14 ರನ್‌ಗಳಿಗೆ ಔಟಾದರು. ಅಂತಿಮವಾಗಿ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 184 ರನ್‌ಗಳಿಸಿ 15 ರನ್‌ಗಳ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡಿತು.

ಈ ಜಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ ತನ್ನ ಶಕ್ತಿ ಮತ್ತೆ ಸಾಬೀತುಪಡಿಸಿದೆ.

https://t.co/yUHXkzVIZw

Leave a Comment