ದೇವರು ದಣಿದಿದ್ದಾನೆ, ದಣಿವಾರಿಸಿಬಿಡಿ
ಕಾಣಿಕೆ ಹುಂಡಿಯಲ್ಲಷ್ಟೆ ಅಲ್ಲ, ಗ್ಲೂಕೋಸ್ ನಲ್ಲೂ ದೇವರಿದ್ದಾನೆ. ಗ್ಲೂಕೋಸ್ ಕೊಡುವುದು ಪರಿಪಾಠವಾಗಲಿ
ಅಯ್ಯಪ್ಪನ ಯಾತ್ರೆಯಲ್ಲಿ,, ಆಗ ಪಾದಯಾತ್ರೆ ಉದ್ದಕ್ಕೂ ಅಯ್ಯಪ್ಪನ ದರ್ಶನ,,
ಇದೀಗ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಯಾತ್ರೆಯ ಸಂಧರ್ಭ, ಕಾನನ ವಾಸ ಧರ್ಮಶಾಸ್ತ ಮಣಿಕಂಠನ ಕಾಣಲು ಕಠಿಣವಾದ ಬೆಟ್ಟವ ಹತ್ತುತ,
ಒಣಗಿದ ಗಂಟಲಲ್ಲಿ, ಪ್ರತಿ ಹೆಜ್ಜೆಗೂ ಬೆವರ ಹನಿಗಳ ಸುರಿಸುತ್ತಾ,, ಅಂಗವಿಕಲರು, ವಯಸ್ಸಾದ ಹಿರಿಜೀವಗಳು, ಪ್ರಪಂಚವನ್ನೇ ಕಾಣದ ಮುಗ್ದ ಮಕ್ಕಳು ಇವರೆಲ್ಲರು ಭಗವಂತನ ದರ್ಶನ ಪಡೆಯುತ್ತಿರುವುದು ಅಭೂತಪೂರ್ವ ಸಂದರ್ಭ ,ಈ ಸುಸಂದರ್ಭದಲ್ಲಿ
ಕಾಣಿಕೆ ಹುಂಡಿಗೆ ಕಾಸು ತುಂಬಿಸಿ, ಸಂತೋಷದಿಂದ ಬೆಟ್ಟ ಇಳಿಯುವುದರ ಜೊತೆಗೆ ಇಳಿಯುವಾಗ ಭಕ್ತರನ್ನು ಗಮನಿಸಿ ಇರುಮುಡಿ ತಲೆಮೇಲಿಟ್ಟು ಭಕ್ತಿ ಮಾರ್ಗದಿ ಒಣಗಿದ ಗಂಟಲಿನಲ್ಲಿ ದೇವರ ಸ್ಮರಿಸುತ್ತಾ, ಬೆಟ್ಟ ಹತ್ತಲು ದೇವರಲ್ಲಿ ಶಕ್ತಿ ಬೇಡುತ್ತಾ, ಬೆಟ್ಟ ಹತ್ತುತಿರುವವರಿಗೆ ಸಾಧ್ಯವಾದರೆ ಗ್ಲೂಕೋಸ್ ನೀಡಿ, ನೀವು ಹಿಡಿ ಕೈಯಷ್ಟು ಕೊಟ್ಟ ಗ್ಲೂಕೋಸ್ ಗೆ ಹಿಡಿಸಲಾರದಷ್ಟು ಪ್ರೀತಿ ಆಶೀರ್ವಾದಗಳು ನಿಮಗೆ ಸಿಗುತ್ತವೆ. ಆ ಕ್ಷಣವನ್ನು ಅನುಭವಿಸಿದವನಿಗಷ್ಟೇ ಗೊತ್ತು.
ಪ್ರತಿಯೊಬ್ಬರಲ್ಲೂ ಅಯ್ಯಪ್ಪನಿರುವಾಗ ದಣಿದ ದೇವರ ದಣಿವಾರಿಸಿಬಿಡಿ.
ತಂಡೋಪತಂಡವಾಗಿ ಯಾತ್ರೆಗೆ ಹೋಗುವ ಭಕ್ತಾದಿಗಳೇ ತಂಡಕ್ಕೆ ಹಂಚಲು ಗ್ಲೂಕೋಸ್ ಕೊಡಿಸಿ ,
ಇದೊಂದು ಅಭ್ಯಾಸವಾಗಲಿ ಪ್ರತಿಬಾರಿಯು ಮನದಲ್ಲಿ .
ಅನಿಸಿದ್ದು ಬರೆದಿರುವೆ, ಸರಿ ಅನಿಸಿದರೆ ಶೇರ್ ಮಾಡಿ.
♥️ಇಂತಿ ನಿಮ್ಮವ
ಶ್ರೀಕಾಂತ್ ಶ್ರೀಕಿ.
ಒಂದು ಒಳ್ಳೆಯ ಸಂದೇಶ 🫶